160 x 600 AD PLACEMENT
160 x 600 AD PLACEMENT

ಪ್ರಜ್ವಲ್ ರೇವಣ್ಣ ಉಚ್ಚಾಟನೆ: ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ: ತಾರಾ

ಗದಗ:-      ಪ್ರಜ್ವಲ್ ರೇವಣ್ಣ ಅವರದ್ದು, ಎನ್ನಲಾಗಿರುವ ಘಟನೆಗಳು ಸತ್ಯ ಆಗಿದ್ದರೆ, ಅವರು ಆರೋಪಿಯಿಂದ ಅಪರಾಧಿ ಅಂತಾ ಸಾಬೀತಾದ್ರೆ ಬಹಳ ಅಸಹ್ಯಕರವಾದ ಘಟನೆಯಾಗಿದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧಾ ಹೇಳಿದರು.       ಅವರು ಗದಗ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅದು ಯಾವುದೇ ಮಹಿಳೆ ಒಪ್ಪಿಕೊಳ್ಳುವಂತಹ ಅಥವಾ ಗೌರವದಿಂದ ಕೂಡಿರುವಂತಹ ಘಟನೆಗಳು ಅಲ್ಲ ಆದರೆ ಜನತಾದಳ ಪಕ್ಷದಲ್ಲಿ ಅವರು […]

ಹೊಸ ತಲೆಮಾರಿನ ಟಿಕೆಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಿದೆ KSRTC …….!

ಬೆಂಗಳೂರು      ನಗದು ರಹಿತ ಪ್ರಯಾಣಕ್ಕೆ ಪ್ರಯಾಣಿಕರ ಒಲವು ಹೆಚ್ಚುತ್ತಿರುವ ಕಾರಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ನಗದು ರಹಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಮಾಡುವುದು ಹಾಗೂ ಚಿಲ್ಲರೆ ಕಿರಿಕಿರಿ ಇಲ್ಲದೆ ಸೇವೆ ಒದಗಿಸಲು ನಗದು ರಹಿತ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿ ಮಾಡುತ್ತಿದೆ.     ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಮತ್ತು ಇತರ ನಗದು ರಹಿತ ವಹಿವಾಟು ವಿಧಾನಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂಗಳು) […]

ರಾಸಲೀಲೆ ಪ್ರಕರಣ : ಪ್ರಜ್ವಲ್‌ ರೇವಣ್ಣ ಉಚ್ಚಾಟಿಸಿದ ಜೆಡಿಎಸ್‌

ಶಿವಮೊಗ್ಗ:      ರಾಸಲೀಲೆ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.      ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣನನ್ನು ಉಚ್ಛಾಟನೆ ಮಾಡಲಾಗಿದೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಯಾರು, ಯಾವಾಗ ಎಲ್ಲಿಗೆ ಹೋಗುತ್ತಾರೆ ಎಂದು ಕಾದು ಕೊಂಡಿ ಕುಳಿತುಕೊಳ್ಳಲಾಗುತ್ತಾ ಎಂದು ಪ್ರಶ್ನಿಸಿದರು.     ಪ್ರಕರಣದ ಗಂಭೀರತೆ ಅರಿತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ […]

ರಾಸಲೀಲೆ ಪ್ರಕರಣ : ನಾವು ಎಲ್ಲಿಯೂ ಓಡಿಹೋಗಿಲ್ಲ : ಹೆಚ್‌ ಡಿ ರೇವಣ್ಣ

ಬೆಂಗಳೂರು:      ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ, ಶಾಸಕ ಎಚ್.ಡಿ. ರೇವಣ್ಣ ಅವರು, ಇಂಥ ಆರೋಪಗಳು ದೇವೇಗೌಡರ ಕುಟುಂಬಕ್ಕೆ ಹೊಸದಲ್ಲ. ಇದೆಲ್ಲಾ ರಾಜಕೀಯ ಪ್ರೇರಿತ ಎಂದು ಸೋಮವಾರ ಹೇಳಿದ್ದಾರೆ.     ಇಂದು ನಗರದಲ್ಲಿ ತಮ್ಮ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರೇವಣ್ಣ, ಸರ್ಕಾರ ಅವರದ್ದೇ ತನಿಖೆ ಮಾಡಲಿ. ಕಾನೂನಿನ ಪ್ರಕಾರ ಏನಿದೆಯೋ […]

ಗೃಹಲಕ್ಷ್ಮಿ ಹಣದಿಂದ : ಫ್ರಿಜ್‌ ಆಯ್ತು …..ಈಗ ಮೊಬೈಲ್‌ ಖರೀದಿಸಿದ ಮಹಿಳೆ ……!

    ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಪ್ರತಿ ತಿಂಗಳ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ನನ್ನ ಫೋಟೋವನ್ನು ವಾಲ್ ಪೇಪರ್‌ನಲ್ಲಿರಿ ಸಂಭ್ರಮಿಸಿದ್ದಾರೆ. ಮೊನ್ನೆ ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್‌ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ.      ಗೃಹಲಕ್ಷ್ಮಿ ಯೋಜನೆ ಬಡವರ ಮನೆಯ ಹಸಿವು ನೀಗಿಸುತ್ತಿರುವುದು ಮಾತ್ರವಲ್ಲ, ನಾಡಿನ ಲಕ್ಷಾಂತರ ತಾಯಂದಿರು, ಅಕ್ಕತಂಗಿಯರ ಕನಸುಗಳನ್ನು ನನಸಾಗಿಸಿದೆ. ಕೆಲವರು ಟಿ.ವಿ ಖರೀದಿಸಿದರೆ, ಮತ್ತೆ ಕೆಲವರು ಮೊಬೈಲ್, ಫ್ರಿಡ್ಜ್, […]

ವಿದೇಶಕ್ಕೆ ಪ್ರಜ್ವಲ್‌ ರೇವಣ್ಣ ಎಸ್ಕೇಫ್‌ : ಸಂತೋಷ್‌ ಲಾಡ್‌ ಪ್ರತಿಕ್ರಿಯೆ ಏನು….?

ಬೆಂಗಳೂರು :      ಅಶ್ಲೀಲ ವಿಡಿಯೋ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ಹಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್‌ ಲಾಡ್‌ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.     ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿದ್ದು, ಈ ಬಗ್ಗೆ ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆತಂದು ತನಿಖೆ ನಡೆಸಲು ಎಸ್‌ಐಟಿ ಸಜ್ಜಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. […]

ನೀರಿನ ಕೊರತೆ ಎದುರಿಸಲು ಬೆಂಗಳೂರು ಹೋಟೆಲ್‌ ಮಾಲೀಕರಿಂದ ಹೊಸ ಐಡಿಯಾ….!

ಬೆಂಗಳೂರು     ಬೆಂಗಳೂರು ನಗರದಲ್ಲಿ ಏರಿಕೆಯಾಗುತ್ತಿರುವ ತಾಪಮಾನದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಒಂದು ಕಡೆ ನೀರಿನ ಕೊರತೆ, ಮತ್ತೊಂದು ಕಡೆ 38 ಡಿಗ್ರಿಗೆ ಉಷ್ಣಾಂಶ ತಲುಪಿದ್ದರಿಂದ ಹೋಟೆಲ್‌ಗಳ ಮಾಲೀಕರು ಕಂಗಾಲಾಗಿದ್ದಾರೆ.      ನಗರಕ್ಕೆ ನೀರು ಪೂರೈಕೆ ಮಾಡುವ ಜಲ ಮಂಡಳಿ ವಿವಿಧ ಮೂಲಗಳ ಮೂಲಕ ಟ್ಯಾಂಕರ್‌ಗಳಿಂದ ನಗರಕ್ಕೆ ನೀರು ಪೂರೈಕೆ ಮಾಡುತ್ತಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.     ನೀರಿನ ಕೊರತೆಯಿಂದ ಜನರು ಮಾತ್ರವಲ್ಲ, ಬೆಂಗಳೂರು ನಗರದ ಹೋಟೆಲ್‌ಗಳ ಮಾಲೀಕರು ಆತಂಕಗೊಂಡಿದ್ದಾರೆ. […]

ಪ್ರಜ್ವಲ್‌ ರೇವಣ್ಣ ಅಮಾನತ್ತಿಗೆ ಹೆಚ್ಚಿದ ಆಗ್ರಹ ….!

ಬೆಂಗಳೂರು     ಹಾಸನದ ಹಾಲಿ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅವರು ರಾಜ್ಯ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾದ ಬೆನ್ನಲ್ಲೆ ಅವರ ಅಮಾನತಿಗೆ ಪಕ್ಷದಲ್ಲೇ ಒತ್ತಡ ಕೇಳಿ ಬಂದಿದೆ.    ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಪಕ್ಷದ ವರಿಷ್ಠ, ಮಾಜಿ […]

ಸ್ವಿಗ್ಗಿಗೆ 3000 ರೂ ದಂಡ ಹಾಕಿದ ಕೋರ್ಟ್‌ ….!

ಬೆಂಗಳೂರು      137 ರೂಪಾಯಿ ಮೌಲ್ಯದ ಐಸ್ ಕ್ರೀಮ್ ತಲುಪಿಸಲು ವಿಫಲವಾಗಿ ಹಾಗೂ ಒಟ್ಟು ಶುಲ್ಕ 187 ರೂಪಾಯಿಗಳನ್ನು ವಾಪಸ್‌ ನೀಡದ್ದಕ್ಕಾಗಿ 3,000 ರೂಪಾಯಿ ಪರಿಹಾರವನ್ನು ನೀಡುವಂತೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಸ್ವಿಗ್ಗಿಗೆ ಆದೇಶಿಸಿದೆ.     ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಆಹಾರ ಸಂಗ್ರಾಹಕರ ಸ್ವಿಗ್ಗಿಗೆ ಒಟ್ಟು 5,187 ರೂ.ಗಳನ್ನು ಬಡ್ಡಿಯೊಂದಿಗೆ ವಾರ್ಷಿಕ 8% ರಂತೆ ಪಾವತಿಸಲು ಹೇಳಿದೆ. 3,000 ಪರಿಹಾರ ಮತ್ತು ಉತ್ಪನ್ನದ ಒಟ್ಟು ಬೆಲೆ 187 ರೂ. ಜೊತೆಗೆ ವ್ಯಾಜ್ಯ ಶುಲ್ಕವಾಗಿ […]

ಸಿಂಹ ಪ್ರಿಯಾ ಮನಗೆ ಬಂದ ನೂತನ ಅತಿಥಿ ಎಂಟ್ರಿ…!

ಬೆಂಗಳೂರು :       ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಂದಲ್ಲಾ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಈ ಸ್ಟಾರ್‌ ದಂಪತಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಸಿಂಹ-ಪ್ರಿಯಾ ಮನೆಯಲ್ಲಿ ಸಂತೋಷ ಮನೆ ಮಾಡಿದೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹೊಸ ಐಷಾರಾಮಿ ಕಾರು ಖರೀದಿಸಿದ್ದು, ತಮ್ಮ ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.     ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಇತ್ತಿಚಿಗೆ ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 […]

More posts
930 x 180 AD PLACEMENT
Lorem Ipsum Dolor Amet?

Lorem ipsum dolor sit amet, consectetur adipisicing elit, sed do eiusmod tempor

Promo Jangan Tampilkan Lagi Ya, Saya Mau !