ಕರ್ನಾಟಕದಲ್ಲಿ ಬಿಜೆಪಿಗೆ “ಪವನ್” ಪವರ್..! – Guarantee News
ರಾಜ್ಯದಲ್ಲಿ 28 ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಮಹದಾಸೆಯಲ್ಲಿರೋ ಬಿಜೆಪಿಗೆ, ತೆಲುಗು ಸ್ಟಾರ್ ಬಲ ಸಿಕ್ಕಿದೆ. ಜಾತಿವಾರು ಜೊತೆಗೆ ಈಗ ಭಾಷಾವಾರು ಮತ ಸೆಳೆಯಲು ಬಿಜೆಪಿ ಬಿಗ್ ಪ್ಲಾನ್ ಮಾಡಿದೆ. ಕರ್ನಾಟಕದಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ, ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮೊರೆ ಹೋಗಿದೆ. ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್, ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕೂಡ ಆಗಿದ್ದಾರೆ. ಅಲ್ಲದೆ, ಇತ್ತೀಚಿಗಷ್ಟೇ ಎನ್ಡಿಎ ಜತೆ ಕೈಜೋಡಿಸಿದ್ದಾರೆ. ಪವನ್ ಕಲ್ಯಾಣ್ ನೇಮ್ & ಫೇಮ್ ಬಳಸಿಕೊಳ್ಳಲು […]